
ದಿನವೊಂದರ ಸಂಜೆ ಐದರಲ್ಲಿ
ಆಗಸದ ತುಂಬೆಲ್ಲಾ ಮೋಡಗಳಾವರಿಸಿ
ಕಾರ್ಮೋಡವೊಂದು ಕರಗಿ
ಮುತ್ತಿನಹನಿಗಳು ಸುರಿದು
ಜಗವೊಂದು ಕ್ಷಣ ಸ್ತಬ್ದವಾಗಿರಲು
ಕರಗಿದ ಮೋಡದಂಚಿನಿಂದ ರವಿಇಣುಕಿದ
ಮುತ್ತಿನ ಮಳೆಹನಿಯ ಸಾಲು ಸಾಲೊಳಗೆ
ಹೊಳೆವ ಸೂರ್ಯನ ಬಿಸಿಲುಕೋಲೊಂದು ತೂರಿ
ತೆಳುನೀಲಿ ಬಾನಂಗಳದಲ್ಲಿ ಮೂಡಿತೊಂದು ಕಾಮನಬಿಲ್ಲು. ೧
ಇದಲೆಕ್ಕಿಸದೆ ಮೋಡ ಕರಗಿರಲು
ರವಿ ಇಣುಕುತಿದ್ದ ಧರಣಿಯತ್ತ
ಕಾಲ ಬಂದೆರಗಿ ರವಿಯ ಜಗ್ಗುತಿದ್ದ
ಪಡುವಣದಿ ಬಾನಿಳೆ ಸಂಧಿಸುವತ್ತ
ಇತ್ತ ಧರೆಯಲ್ಲಿ ಮುತ್ತಿನ ಹನಿಗಳು
ಕೆಸರಲ್ಲಿ ಕರಗಿ ಮತ್ತೆ ಒಂದಾದವು
ಮುಂಗಾರಿನ ಮೊದಲ ಮಳೆಯಲ್ಲಿ ಮಿಂದು
ಭೂತಾಯಿಯ ಹಸಿಮೈ ಕಂಪು ಸೂಸಿರಲು
ಉದ್ದೀಪನಗೊಂಡು ಉಲ್ಲಾಸದಿ ಜೀಕಿತೊಂದು ಹುಲ್ಲುಗರಿಕೆ. ೨
14 comments:
Good start!!! Charanana baravanige kannada manasugalanna gellutha sagali!!! Vijayibhava.......!
"ಇದಲೆಕ್ಕಿಸದೆ ಮೋಡ ಕರಗಿರಲು ರವಿ ಇಣುಕುತಿದ್ದ ಧರಣಿಯತ್ತ
ಕಾಲ ಬಂದೆರಗಿ ರವಿಯ ಜಗ್ಗುತಿದ್ದ ಪಡುವಣದಿ ಬಾನಿಳೆ ಸಂಧಿಸುವತ್ತ"
ಹೌದು, ಮಳೆಯ ಸೌಂದರ್ಯ ನೋಡಿ ಸವಿಯಲು ಆ ರವಿಗೂ ಕಾಲನ ಅಪ್ಪಣೆ ಬೇಕು
ಏಷ್ಟು ಸತ್ಯ, ಬದುಕಿನಲ್ಲಿ ಏನೆಲ್ಲ ಇದ್ದರು ಅದನ್ನು ಅನುಭವಿಸುವ ಯೋಗವಿರದಿದ್ದರೆ ಎನೂ ಇಲ್ಲದಂತೆ ಅನಿಸುತ್ತದೆ.
ಇದನ್ನೆ ಇನ್ನೊಂದು ರೀತಿಯಲ್ಲಿ ಅರ್ಥೈಸಿಕೊಳ್ಳಬಹುದು, ಮಳೆಯಲ್ಲಿ ಮಿಂದ ಧರೆಯ ಚೆಂದವ ನೋಡಲು ಧಗಧಗಿಸುವ ಭಾಸ್ಕರನೂ ಹಪಹಪಿಸಿತ್ತಾನೆ.
ಇನ್ನು ಕಟು ಹೃದಯದವರದು ಯಾವ ಲೆಕ್ಕ?
"ಮುಂಗಾರಿನ ಮೊದಲ ಮಳೆಯಲ್ಲಿ ಮಿಂದು
ಭೂತಾಯಿಯ ಹಸಿಮೈ ಕಂಪು ಸೂಸಿರಲು
ಪಚ್ಚೆಪೈರಿನ ಹಚ್ಚಹಸುರಿನ ಮೆರವಣಿಗೆ
ಖಗಮಿಗಜಗಗಳ ತಾಳಮೇಳಬೆರೆತು
ನಿಸರ್ಗ ಮೈಸಿರಿಯ ಒಡ್ಡೋಲಗದಲ್ಲಿ ಸುರೆಸುರಿದು
ರಸದೌತಣದ ಭೋಜನಗೈದುಮೈಭಾರವಾಗಿ
ಮೊನಚು ತಲೆತಿರುಗಿ ಉದ್ದೀಪನಗೊಂಡು
ಉಲ್ಲಾಸದಿ ಜೀಕಿತೊಂದು ಹುಲ್ಲುಗರಿಕೆ"
ಮಳೆಯಿಂದ ಮೇಳೈಸುವ ಸಂಭ್ರಮ ವರ್ಣಿಸಲು ಹುಲ್ಲಿನ ಗರಿಕೆಯೊಂದರ ಜೀಕಾಟವೊಂದೆ ಸಾಕು.
ಮಳೆಯೊಂದಿಗೆ ಬೆಸೆದುಕೊಂಡಿರುವ ಮೇಲ್ನೋಟಕ್ಕೆ ವ್ಯಕ್ತವಾಗದಂತೆ ಕಾಣುವ ಕವಿತೆಯಲ್ಲಿನ ಭಾವಗಳು, ಓದುಗನನ್ನು ಮೆಲ್ಲಗೆ ಆವರಿಸುತ್ತವೆ, ಕಾಡುತ್ತವೆ.
ಗೆಳೆಯ, ನಿನ್ನ ಒಳನೋಟ ಇನ್ನಷ್ಟು ಗಾಢವಾಗಲಿ, ಅದರಿಂದ ಹೊರಹೊಮ್ಮಲಿರುವ ಭಾವ ಲಹರಿಗಳು ಇನ್ನಷ್ಟು ಆಪ್ತವಾಗಲಿ.
Charan...man pls transalte this to English or Hindi..its going over my head.. :-)
btw good start....now you can share your thoughts with the world over your blog...all the best.
ಮುಸ್ಸಂಜೆಯ ಹನಿಗಳು, ಓದಿದವರನ್ನು ಒಂದು ಕ್ಷಣ ಮುಸ್ಸಂಜೆಯ ಹನಿಗಳಲ್ಲಿ ತೇಲಿಸಿ ಬಿಡ್ತೆ. ಕೊನೆಯಲ್ಲಿ ಹುಲ್ಲುಗರಿಕೆಯನ್ನು ಕುರಿತು ಬರೆದ ಸಾಲುಗಳು ತುಂಬ ಇಷ್ಟವಾದವು.
Good going, please continue..... :)
its very nice man .......i would like to see more on tis blog anyway congrats for ur wonderful writings.....and best of luck .....
ಚರಣ ನಿನ್ನ ಕವಿತಾ ಕಲ್ಪನೆ ಚೆನ್ನಾಗಿ ಮೂಡಿ ಬ೦ದಿದೆ ......
ನನಗೆ ಮೆಚ್ಚುಗೆ ಅದ ಸಾಲುಗಳು..
-ಕರಗಿದ ಮೋಡದಂಚಿನಿಂದ ರವಿಇಣುಕಿದ
-ಹೊಳೆವ ಸೂರ್ಯನ ಬಿಸಿಲುಕೋಲೊಂದು ತೂರಿ
ತೆಳುನೀಲಿ ಬಾನಂಗಳದಲ್ಲಿ ಮೂಡಿತೊಂದು ಕಾಮನಬಿಲ್ಲು. ೧
.......ನೀನು ಕವನ ಬರೆಯುವುದನ್ನು ಹಿಗೆ ಮು೦ದುವರೆಸು....ಶುಭಾವಾಗಲಿ
It's really a difficult task to express your deepest thoughts with such finest words!
I never really thought You have such a talent hidden within u.. great going charan.. All the best :)
ತುಂಬಾ ಚೆನ್ನಾಗಿದೆ
ನನ್ನ ಸಹೋದ್ಯೋಗಿ ಶ್ರುತಿಯವರು ಬರೆದಿದ್ದು. ಗೂಗಲ್ನಲ್ಲಿ ಅವರ ಸ್ವಂತ ಖಾತೆ ಇಲ್ಲದ ಕಾರಣ ನಾನೇ ಹಾಕಿದ್ದೇನೆ.
ಮುಸ್ಸಂಜೆಯ ಹನಿಗಳ ಮೇಲೆ ಒಂದಿಷ್ಟು ತುಂತುರು ಮಾತು.
-----ಶ್ರುತಿ ಮಡ್ಲೂರು.
ಕವನ ಓದಿಸಿಕೊಂಡು ಹೋಗುವ ಮಟ್ಟಿಗೆ ಇದೆ. ಒಳ್ಳೆಯ ಪ್ರಥಮ ಪ್ರಯತ್ನ. ಮೊದಲ ಸಾಲಿನಲ್ಲಿ ಒಂದು ಸಂಖ್ಯೆ ಇದೆ(ಐದರಲ್ಲಿ). ಇದು ಅನಗತ್ಯವೆನಿಸುತ್ತದೆ. ತುಂಬಾ ಶಬ್ದಗಳ ಪುನರಾವರ್ತನೆ ಇದೆ. ಇನ್ನೂ ಈ ಕವನವನ್ನ ಚಿಕ್ಕ ಮತ್ತು ಚೊಕ್ಕಟವಾಗಿ ಮಾಡಬೇಕಾದ ಅವಶ್ಯಕತೆ ಇದೆ. ಸಾಮಾನ್ಯ ಜನರಿಗೂ ತಲುಪುವಂತಿರಬೇಕು. ಕವನದಿ ಹೇಳಹೊರಟಿರುವ ವಿಚಾರ ಪುಟ್ಟ ಭಾವನೆಯೊಂದಿಗೆ ಹಿಡಿದಿಡು ವಂತಿರಬೇಕು. ಸರಳ ಶಬ್ದಗಳೊಂದಿಗೆ ವಿರಳವಾದ ಸಾಹಿತ್ಯ ಜನರ ಮರಳು ಮಾಡುವಂತೆ ಇರಲಿ. ಅದು ನಿಮ್ಮ ಮುಂದಿನ ಕವನದಲ್ಲಿ ಇರುತ್ತದೆಂದು ಆಶಿಸುವ.........
......................ಶ್ರುತಿ
Navodayada koosinanthe prakruthi premavu illi meredide...Very Nice
keep going
ಚರಣರಾಜ ಮತ್ತೀಹಳ್ಳಿ ರವರಿಗೆ ನಮಸ್ಕಾರ. . .
ನಾವು ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತ-ಮುತ್ತ ಇರುವ ಶಾಲಾ ಮಕ್ಕಳಿಗೆ ಪರಿಸರ ಮತ್ತು ಕಾಡು. ವನ್ಯವಿಜ್ಞಾನದ ಬಗ್ಗೆ ಕಮ್ಮಟಗಳನ್ನು ಮಾಡುತ್ತಿದ್ದೆವೆ. ಮಕ್ಕಳಿಗೆ ಬಹಳಷ್ಟು ನಿಸರ್ಗದ ಬಗ್ಗೆ ತಿಳಿಸುವ ಯೋಜನೆ ಇದೆ. ಮತ್ತೆ ಮಕ್ಕಳಿಗಾಗಿ ಮಾಡೀರುವ ಕಾನನ ಇ-ಪತ್ರಿಕೆ ಮಾಡುತ್ತಿದ್ದೆವೆ. ಇದು ಸುಮಾರು ಮೂರು ವರುಷಗಳಿಂದ ನಡೆಯುತ್ತಿದೆ. ಈ ಕಾನನ ಪತ್ರಿಕೆಯಲ್ಲಿ ಈ ನಿಮ್ಮ 'ಮುಸ್ಸಂಜೆಯ ಹನಿಗಳು' ಕವನವನ್ನು ಬಳಸಿಕೊಳ್ಳಬಹುದಾ?
ಇದು ಕಾನನದ ವಿಳಾಸ : http://issuu.com/kaanana
https://www.facebook.com/groups/211317505667099/
balasikolli...
ಚರಣರಾಜ ಮತ್ತೀಹಳ್ಳಿ ರವರಿಗೆ
ಕಾನನ ಪತ್ರಿಕೆಯಲ್ಲಿ ಈ ನಿಮ್ಮ 'ಮುಸ್ಸಂಜೆಯ ಹನಿಗಳು' ಕವನವನ್ನು ಬಳಸಿಕೊಳ್ಳಲ್ಲೂ ಅನುಮತಿನೀಡಿದಕ್ಕೆ ತುಂಬ ಧನ್ಯವಾದಗಳು ಸರ್. . . ನಿಮ್ಮ ಇ-ಮೇಲ್ ವಿಳಾಸ ಕಳಿಸಿಕೋಡಿ.
ನಮ್ಮ ಇ-ಮೇಲ್ ವಿಳಾಸ :kaanana.mag@gmail.com
ಹಳೆಯ ಕಾನನ ಪ್ರತಿಗಳನ್ನು ನೋಡಲು : http://issuu.com/kaanana
ಧನ್ಯವಾದಗಳು
charanmgraj@gmail.com
Post a Comment